ಭಾಗ್ಯಲಕ್ಷ್ಮೀ ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಅಕ್ಟೋಬರ್ ೧೦, ೨೦೨೨ ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭:೦೦ ಗಂಟೆಗೆ ಪ್ರಸಾರವಾಗುತ್ತಿದೆ. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಮಂಗಳ ಗೌರಿ ಮದುವೆ ಧಾರಾವಾಹಿಯು ಮುಗಿದ ನಂತರ ಆರಂಭವಾಗಿದೆ. ಅಷ್ಟಅಲ್ಲದೇ, ಸುಮಾರು ಹತ್ತು ವರ್ಷಗಳ ನಂತರ ಮತ್ತೆ ನಾಯಕಿಯಾಗಿ ಸುಷ್ಮಾ ಕೆ. ರಾವ್‌ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ. == ಕಥೆ == ಅಕ್ಕ ತಂಗಿಯ ಬಾಂಧ್ಯವದ ಕಥೆಯ ಹಂದರವಾಗಿದೆ. ಭಾಗ್ಯ (ಸುಷ್ಮಾ ಕೆ. ರಾವ್‌) ಕಥೆಯ ನಾಯಕಿಯಾಗಿದ್ದು, ಜೀವನದಲ್ಲಿ ಏನೇ ಬಂದರೂ ಅದನ್ನು ಖುಷಿಯಿಂದ ಸ್ವಾಗತಿಸಿ, ಮನೆಯ ಜವಬ್ದಾರಿಯನ್ನು ಹೊತ್ತು ಇಡೀ ಜೀವನವನ್ನು ತನ್ನ ಸಂಸಾರಕ್ಕಾಗಿ ಮುಡಿಪಾಗಿಟ್ಟಿರುವ ಹೆಣ್ಣಾಗಿರುತ್ತಾಳೆ. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದು ಕೊಂಡ ಲಕ್ಷ್ಮೀಯನ್ನು (ಭೂಮಿಕಾ) ತನ್ನ ಮಗಳಂತೆ ಸಾಕಿದ್ದಾಳೆ. ಲಕ್ಷ್ಮೀಗೆ ಒಳ್ಳೆಯ ವರನ್ನು ಹುಡುಕಿ ಅವಳ ಮದುವೆ ಮಾಡುವ ಜವಬ್ಬಾರಿಯನ್ನು ಭಾಗ್ಯ ಹೊತ್ತಿದ್ದಾಳೆ. ಲಕ್ಷ್ಮೀ ಭಾಗ್ಯಳ ಚಿಕ್ಕಪ್ಪನ ಮಗಳಾಗಿದ್ದಾಳೆ. ಭಾಗ್ಯ ತನ್ನ ಗಂಡನಿಂದ ನಿಂದನೆಗೆ ಒಳಾಗಾಗುತ್ತಿರುತ್ತಾಳೆ. ಆದರೂ, ಈ ವಿಷಯವನ್ನು ಎಲ್ಲೂ ತೋರಿಸದೇ ನಗು ಮುಖದಿಂದ ಜೀವನವನ್ನು ನಿರ್ವಹಿಸುತ್ತ ಇರುತ್ತಾಳೆ. ಈ ಧಾರಾವಾಹಿಯು ನಂತರ 'ಭಾಗ್ಯಲಕ್ಷ್ಮಿ' ಮತ್ತು 'ಲಕ್ಷ್ಮಿ ಬಾರಮ್ಮ' ಎಂಬ ಎರಡು ಧಾರಾವಾಹಿಗಳಾಗಿ ವಿಭಜನೆಯಾಯಿತು. ಈಗ, ಈ ಕಥೆಯು ಭಾಗ್ಯಾಳ ಜೀವನದ ಮೇಲೆ, ಪತಿ ಮತ್ತು ಮಗಳ ಕಾರಣದಿಂದಾಗಿ ಅತ್ತೆ ಮಾವಂದಿರು ಎದುರಿಸುತ್ತಿರುವ ತೊಂದರೆಗಳು, ಹೇಗೆ ಭಾಗ್ಯಳ ಅತ್ತೆ ಭಾಗ್ಯಳ ಹಕ್ಕುಗಳಿಗಾಗಿ ಅವಳಿಗೆ ಶಕ್ತಿಯನ್ನು ನೀಡುತ್ತಾಳೆ. ಮತ್ತೆ ಭಾಗ್ಯಳ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಉತ್ತೇಜಿಸುತ್ತಾಳೆ ಎಂಬುವುದರ ಮೇಲೆ ಕೇಂದ್ರಕೃತವಾಗಿದೆ. == ಕಲಾವಿದರು == === ಮುಖ್ಯ ಪಾತ್ರಗಳು === ಸುಷ್ಮಾ ಕೆ. ರಾವ್ : ಭಾಗ್ಯ ಆಗಿ; ತಾಂಡವ್ ಹೆಂಡತಿ. ಪದ್ಮಜಾ ರಾವ್‌': ಕುಸುಮ ಆಗಿ; ತಾಂಡವ್ ತಾಯಿ, ಭಾಗ್ಯಳ ಅತ್ತೆ, ಕಾವೇರಿಯ ಅಕ್ಕ. ಸುದರ್ಶನ್‌ ರಂಗಪ್ರಸಾದ್‌: ತಾಂಡವ್ ಆಗಿ; ಕುಸುಮಾಳ ಮಗ, ಭಾಗ್ಯಳ ಗಂಡ. === ಇತರೆ ಪಾತ್ರಗಳು === ಗೌತಮಿ ಗೌಡ: ಶ್ರೇಷ್ಠ ಆಗಿ; ಭಾಗ್ಯಳ ಗಂಡ. ತಾಂಡವ್ ಪ್ರೇಯಸಿ. ಕಾವ್ಯ ಗೌಡ ಪಾತ್ರ ಬದಲವಾಣೆಯ ನಂತರ. ಅಮೃತ ಗೌಡ: ತನ್ವಿ ಆಗಿ; ಭಾಗ್ಯ ಮತ್ತು ತಾಂಡವ್ ಮಗಳು. ನಿಹಾರ್‌ ಗೌಡ: ತನ್ಮಯ್ ಆಗಿ; ಭಾಗ್ಯ ಮತ್ತು ತಾಂಡವ್‌ ಮಗ. ಸುನೀತಾ ಶೆಟ್ಟಿ: ಸುನಂದಾ ಆಗಿ; ಭಾಗ್ಯಳ ತಾಯಿ. ಆಶಾ ಅಯ್ಯನರ್: ಪೂಜಾ ಆಗಿ; ಭಾಗ್ಯಳ ಸ್ವಂತ ತಂಗಿ. ಭೂಮಿಕಾ‌ ರಮೇಶ್: ಲಕ್ಷ್ಮೀ ಆಗಿ; ಭಾಗ್ಯಳ ಚಿಕ್ಕಪ್ಪನ ಮಗಳು, ವೈಷ್ಣವ್ ಹೆಂಡತಿ. ಶಮಂತ್‌ ಗೌಡ ಆಲಿಯಾಸ ಬ್ರೋ ಗೌಡ: ವೈಷ್ಣವ್ ಆಗಿ; ಕಾವೇರಿಯ ಮಗ, ತಾಂಡವ್ ತಮ್ಮ, ಲಕ್ಷ್ಮಿಯ ಗಂಡ. ತನ್ವಿ ರಾವ್: ಕೀರ್ತಿಯಾಗಿ; ವೈಷ್ಣವ್ ಮಾಜಿ ಪ್ರೇಯಸಿ. ಸುಷ್ಮಾ ನಾಣಯ್ಯ: ಕಾವೇರಿ ಆಗಿ; ವೈಷ್ಣವ್ ತಾಯಿ‌, ಕುಸುಮಾಳ ತಂಗಿ. ಸುರೇಶ್ ರೈ: ಕೃಷ್ಣಕಾಂತ್ ಆಗಿ; ವೈಷ್ಣವ್ ತಂದೆ,‌ ಕಾವೇರಿಯ ಗಂಡ. ರಜನಿ ಪ್ರವೀಣ್: ಸುಪ್ರೀತಾ ಆಗಿ; ವೈಷ್ಣವ್ ಸೋದರ ಅತ್ತೆ. ಲಾವಣ್ಯ ಹಿರೇಮಠ್ : ವಿಧಿ ಆಗಿ; ವೈಷ್ಣವ್ ತಂಗಿ. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ರೂಪಾಂತರಗಳು == == ಉಲ್ಲೇಖಗಳು ==